ಮಧುರಾ (ಅಲಕಾ) ಕರ್ಣಮ್ ಕನ್ನಡ ಸಾಹಿತ್ಯದ ಮಧುರ ಲೋಕ
ಕರ್ಮವೀರದಲ್ಲಿ- 3 ಪ್ರಕಟಿತ ಕಥೆಗಳು
ಚಿಕ್ಕೂ 10-5-2026
ನೀರ ಮೇಲಣ ಗುಳ್ಳೆ 5-4-2026
ನೀರ ಮೇಲಣ ಗುಳ್ಳೆ – ಕರ್ಮವೀರ 5-4-2026 –
ಕಥೆ ತುಂಬಾ ಚೆನ್ನಾಗಿದೆ. ಉತ್ತರ ಕರ್ನಾಟಕದ ಭಾಷೆಯ ಸೊಗಡು ಇಲ್ಲಿ ಮಿಂಚಿದೆ. ಇನ್ನು ಪಾತ್ರಗಳ ಸೃಷ್ಟಿ ಅದ್ಭುತವಾಗಿದೆ. ಬದುಕಿನ ಘೋರ ಸತ್ಯಗಳನ್ನು ಅವ್ವ ಬಯಲು ಮಾಡುತ್ತಾಳೆ. ತಲೆಗೆ ಆಪರೇಷನ್ ಆಗಿದೆ, ಆಕೆ ಏನು ಮಾತಾಡುತ್ತಾಳೆಂಬುದು ಯಾವ ಬಂಧುವಿನ ಊಹೆಗೂ ನಿಲುಕದು. ಯಾರೂ ನಿರೀಕ್ಷೆ ಮಾಡದಂತಹ ತಮ್ಮ ಪೂರ್ವಾಶ್ರಮದ ಘಟನೆಗಳ ಫ್ಲಾಷ್ ಬ್ಯಾಕ್ ಕೇಳಿದ ಬಂಧುಗಳು ತಬ್ಬಿಬಾಗುತ್ತಾರೆ. ಎಷ್ಟೋ ವರ್ಷಗಳಿಂದ ಮನದ ಮೂಲೆಯಲ್ಲಿ ಅಡಗಿ ಕುಳಿತಿದ್ದ ಅಗ್ನಿಪರ್ವತವೆಂಬ ಸತ್ಯಗಳು ಸ್ಫೋಟ ಗೊಂಡ ಮೇಲೆ ತಾನು ಇವನ್ನು ಹೇಳಬಾರದಿತ್ತು ಎನಿಸುತ್ತದೆ. ಬಂಧುಗಳ ಮಧ್ಯೆ ಬರಲು ಒಪ್ಪದೆ ಆಶ್ರಮದ ಬಳಿಯಲ್ಲೇ ನೆಲೆಸಲು ಅವ್ವ ತೀರ್ಮಾನಿಸುತ್ತಾಳೆ. ಸಂಭಾಷಣೆ ಮನ ಮುಟ್ಟುವಂತಿದೆ.
ಎಷ್ಟೋ ಮನೆಗಳಲ್ಲಿ ನಡೆದಿರಬಹುದಾದ ಘಟನೆಗಳು ಇವು ಎಂಬಂತೆ ದೃಶ್ಯಗಳು ಕಾಣಿಸಿಕೊಳ್ಳುತ್ತವೆ.
ನಮ್ಮಾಕೆ ಓದಿ, ಮೆಚ್ಚಿ, ಈಗಲೇ ಓದಿ ಎಂದು ನನಗೆ ರೆಕಮೆಂಡ್ ಮಾಡಿದ ಕಥೆ ಇದು.
ಅಭಿನಂದನೆಗಳು
ಎಂಎಸ್ಎನ್ (ಎಮ್.ಎಸ್.ನರಸಿಂಹಮೂರ್ತಿ, ಹಾಸ್ಯ ಬರಹಗಾರರು)
ಏಪ್ರಿಲ್ ಫೊಲ 6-4-2014
ಯುಗಾದಿ ಸೇಲ 9-4-2006
ವಾತಾಪಿ ಜಿರ್ಣೋಭವ 30-3-2008
ಸೀರೆ ಸೆಲೆಕ್ಷನ 25-11-2012
ಮಹಿಳಾ ಮಣಿಗಳ ಪಾರ್ಟಿ 10-6-2012