N_DD Chanada Shubodaya
previous arrow
next arrow

ಮಧುರಾ (ಅಲಕಾ) ಕರ್ಣಮ್ ಅಂತರ್ಜಾಲ ತಾಣ ಲೋಕಾರ್ಪಣೆ

ಮಧುರಾ (ಅಲಕಾ) ಕರ್ಣಮ್ ಅಂತರ್ಜಾಲ ತಾಣ ಲೋಕಾರ್ಪಣೆ 28-2-2026

ಪರಿಚಯ

ಮಧುರಾ (ಅಲಕಾ) ಕರ್ಣಮ್ -  ಬೆಳಗಾವಿಯಲ್ಲಿ ಜನಿಸಿ ವಿಜ್ಞಾನದಲ್ಲಿ ಬಿ.ಎಸ್ಸಿ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು. ಹಾಸ್ಯ ಬರಹಗಳನ್ನೊಳಗೊಂಡು ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಕತೆ ಮತ್ತು ಲೇಖನಗಳು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿ ಅನೇಕ ಬಹುಮಾನಗಳನ್ನೂ ಪಡೆದವು. ಇವೆಲ್ಲ 22 ಕೃತಿಗಳಾಗಿ ಮೂಡಿ ಬಂದಿವೆ. ಅವುಗಳಲ್ಲಿ ಹನ್ನೆರೆಡು ಕಥಾಸಂಕಲನಗಳು, ಮೂರು ಹಾಸ್ಯ ಲೇಖನ ಮತ್ತು ಪ್ರಬಂಧಗಳ ಸಂಕಲನ, ಒಂದು ಕವನ ಸಂಕಲನವೂ ಸೇರಿವೆ. ಎರಡು ಮಿನಿ ಕಾದಂಬರಿಗಳು ನಾಲ್ಕು ಜೀವನಚರಿತ್ರೆಗಳೂ ಚಿಕ್ಕದಾಗಿ ಬಂದಿವೆ. ಅವರ ಕಥೆಗಳು ಕರ್ಮವೀರ ದೀಪಾವಳಿ ಕಥಾಸ್ಪರ್ಧೆ, ಉತ್ಥಾನ ಕಥಾಸ್ಪರ್ಧೆ, ವಿದ್ಯಾಧರ ಪ್ರತಿಷ್ಠಾನದ ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿವೆ. ಬೆಳಗಾವಿಯಲ್ಲಿ ನಡೆದ ಕಥಾಕಮ್ಮಟದಲ್ಲೂ ಭಾಗವಹಿಸಿದ್ದಾರೆ. ಅವರ ಕಥೆಗಳು ತೆಲಗು ಭಾಷೆಗೂ ಅನುವಾದಗೊಂಡು ತೆಲಗು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನೇಕ ಕವಿಗೋಷ್ಠಿಗಳಲ್ಲಿ ಕವಿತಾವಾಚನವನ್ನೂ ಮಾಡಿದ್ದಾರೆ. ಲಂಡನ್‌ನಲ್ಲಿ ವಾಸವಿದ್ದಾಗ ಅಲ್ಲಿನ ಅನುಭವಗಳು ಕಥೆ, ಹಾಸ್ಯ ಮತ್ತು ಲೇಖನಗಳ ರೂಪ ಪಡೆದಿವೆ. ಆಕಾಶವಾಣಿಯಲ್ಲೂ ಅನೇಕ ಕಥೆ ಮತ್ತು ಹಾಸ್ಯದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೂರದರ್ಶನದಲ್ಲೂ ಅಡಿಗೆಯ ಕಾರ್ಯಕ್ರಮಗಳೂ ಆಗಿವೆ. ರಂಗೋಲಿ ಬಿಡಿಸುವದರಲ್ಲೂ ಅವರು ನಿಪುಣರಾಗಿದ್ದು ಅನೇಕ ರಾಜ್ಯಮಟ್ಟದ ಬಹುಮಾನಗಳನ್ನು ಪಡೆದಿದ್ದಾರೆ. ಪ್ರತಿ ವರ್ಷ ಗಣೇಶನ ಮೂರ್ತಿಯನ್ನು ಕೂಡಾ ನಿರ್ಮಿಸುತ್ತಾರೆ. ಪ್ರಸ್ತುತ ಲೇಖಿಕಾ ಸಾಹಿತ್ಯ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದು “ಸಾಹಿತ್ಯ ಸಖಿ” ತ್ರೆೈಮಾಸಿಕ ಪತ್ರಿಕೆಯ ಉಪಸಂಪಾದಕರಾಗಿದ್ದಾರೆ. ತಮ್ಮ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ೪ ದತ್ತಿ ಪ್ರಶಸ್ತಿಗಳೊಂದಿಗೆ ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ಪ್ರಶಸ್ತಿ ಮತ್ತು ನಿರುಪಮಾ ಕಥಾಪ್ರಶಸ್ತಿ, ಮುಂಬೈನ ಸುಶೀಲಾಬಾಯಿ ಶೆಟ್ಟಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ.ಇಂದಿರಾ ಪ್ರಶಸ್ತಿ, ಉತ್ತರ ಕರ್ನಾಟಕ ಸಂಘ ಧಾರವಾಡದ ಶಾಂತಾದೇವಿ ಕಣವಿ ಕಥಾಪ್ರಶಸ್ತಿ ಮತ್ತು ಬೆಂಗಳೂರು ನಗರ  ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾರತ್ನ ಪ್ರಶಸ್ತಿಯೂ ಸೇರಿದೆ. 
ಹೆಚ್ಚಿನ ಮಾಹಿತಿಗಾಗಿ ಓದಿ

೧. ಮರಳಿ ಬಂದನಾ ವಸಂತ,
೨. ಅವಳ ಭಾವಗಳ ಸುತ್ತ,
೩. ಋಣ
ಕರ್ನಾಟಕ ಲೇಖಕಿಯರ ಸಂಘದ ‘ತ್ರಿವೇಣಿ’ ದತ್ತಿ ಪುರಸ್ಕಾರ ೨೦೧೪

೪. ಗುಂಡ ಪುರಾಣ ಹಾಸ್ಯ ಕೃತಿ
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸಿ ೨೦೧೪

೫. ಜೀವಧಾರಾ.. ..ನಿರಂತರಾ..
ಮುಂಬೈನ ಸುಶೀಲಾ ಬಾಯಿ ಶೆಟ್ಟಿ ಪ್ರಶಸ್ತಿ ೨೦೧೪

೬. ಆಕ್ರಮಣ
೭. ಆಲದ ನೆರಳು
ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ. ಇಂದಿರಾ ಪ್ರಶಸ್ತಿ ೨೦೧೬

ಲೇಖಿಕಾ ಸಾಹಿತ್ಯ ವೇದಿಕೆಯ ಪುಸ್ತಕ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮಾ ಹಾರನಹಳ್ಳಿ ದತ್ತಿ ಪ್ರಶಸ್ತಿ ೨೦೧೬

೮. ಅವತಾರ
ಕನ್ನಡ ಸಾಹಿತ್ಯ ಪರಿಷತ್ತಿನ ಲಕ್ಮಿದೇವಿ ಶಾಂತರಸ ಹೆಂಬೇರಾಳು ಪ್ರಶಸ್ತಿ ೨೦೧೭

೯. ಒಳಗಣ ಜ್ಯೋತಿ
೧೦. ಪಾರ್ಟುಗಳ ಪರದಾಟ ಹಾಸ್ಯ ಕೃತಿ
ಕನ್ನಡ ಸಾಹಿತ್ಯ ಪರಿಷತ್ತಿನ ಮಾಣಿಕರಾವ ದತ್ತಿ ಪ್ರಶಸ್ತಿ ೨೦೧೮

೧೧. ದೀಪದ ಕೆಳಗಿನ ಕತ್ತಲೆ
೧೨. ಬುವಿಯ ಚುಕ್ಕೆ
೧೩. ಸುಪ್ತಸಾಗರ
ಕರ್ನಾಟಕ ಲೇಖಕಿಯರ ಸಂಘದ ನಿರುಪಮಾ ಕಥಾ ಪ್ರಶಸ್ತಿ ೨೦೨೦

೧೪. ತಿರುವುಗಳು ೨ ಮಿನಿ ಕಾದಂಬರಿಗಳ ಸಂಕಲನ
೧೫. ಮಲ್ಲಿಗೆ ಬಳ್ಳಿಯ ಅನುಬಂಧಗಳು ಪ್ರಬಂಧಗಳ ಸಂಕಲನ
೧೬. ದಡ
೧೭. ಬೌದ್ಧಾವತಾರ..
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ೨೦25

೧೮. ಕಣ್ಣಾ ಮುಚ್ಚೇ ಕಾಡೇ ಗೂಡೇ..

Email : madhurakarnam@yahoo.in

Website : https://madhurakarnam.in

ಮಧುರಾ (ಅಲಕಾ) ಕರ್ಣಮ್ Biodata Detail  ಡೌನ್ ಲೋಡ್
ಮಧುರಾ (ಅಲಕಾ) ಕರ್ಣಮ್ Biodata Short  ಡೌನ್ ಲೋಡ್

ಪುಸ್ತಕಗಳು

N_Kanne Muche Kade Gude
previous arrow
next arrow

ಪುಸ್ತಕ ಲೋಕಾರ್ಪಣೆ

N_Avala Rhuna Gunda 1 Banner
previous arrow
next arrow

ಪ್ರಶಸ್ತಿಗಳು

N_KASAPA
previous arrow
next arrow

ಪ್ರಶಸ್ತಿ ಸಮಾರಂಭ

N_Alalada Neralu M K Indira Award Function
previous arrow
next arrow

ಡಿಡಿ ಚಂದನ ಮತ್ತು ಆಕಾಶವಾಣಿ

N_DD Chanadana Shubodaya 1
previous arrow
next arrow

ಪ್ರಕಟಿತ ಕಥೆಗಳು

ಪ್ರಬಂಧಗಳು

ಪುಸ್ತಕ ಪರಿಚಯ

ಕಲಾಲೋಕ

ಸುದ್ದಿ ಪತ್ರಿಕೆಗಳು

ಹೆಚ್ಚುವರಿ ಸುದ್ದಿಗಳು ಮತ್ತು ಚಿತ್ರಗಳು

ಪುಸ್ತಕ ದೊರಯವ ಸ್ಥಳ