ಹೆಚ್ಚಿನ ಸುದ್ದಿಗಳು & ಚಿತ್ರಗಳು -3

೫ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ 2026

30-4-2026 ರಂದು ನನ್ನ ಪಾಲಿನ ಆನಂದದ ದಿನವಿದು. ತಾಯಿ ತೀರಿಹೋಗಿ ಅನೇಕ ವರ್ಷಗಳ ನಂತರ ಮತ್ತೆ ತವರಿನ ನೆನಪು ಮರುಕಳಿಸಿತು. ಆದರ.. ಪ್ರೀತಿ ತುಂಬಿದ ಮಾತೃ ಹೃದಯಕ್ಕೆ ಸಲಾಮ್.
ಲಲಿತಮ್ಮ ಡಾ.ಚಂದ್ರಶೇಖರ್ ಅವರು ನನ್ನನ್ನು ಮನೆಗೆ ಆಹ್ವಾನಿಸಿದ್ದರೂ ಹೋಗಲಾಗಿರಲಿಲ್ಲ. ಇಂದು ಬರುತ್ತೇವೆ ಎಂದು ಫೋನ್ ಮಾಡಿದ ತಕ್ಷಣ ಅವರ ಧ್ವನಿಯಲ್ಲಿ ಆನಂದ ನಾಟ್ಯವಾಡಿತ್ತು. ” ಬಾರಮ್ಮಾ, ಕಾಯ್ತಾ ಇರ್ತೀನಿ” ಎಂದಿದ್ದರು. ಆದರೆ ಅವರು ಕಾಯ್ದ, ಸುಖಾಗಮನವನ್ನು ಬಯಸಿದ ಪರಿ ಮಾತ್ರ ಅಮೋಘವಾದದ್ದು. ಸ್ವತಃ ತಮ್ಮ ಕೈಯಾರೆ ಕಟ್ಟಿದ ಪುಟ್ಟ ಹೂಗೊಂಚಲನ್ನು ಮನೆಯ ಹೊರಗಡೆ ಚಪ್ಪಲಿ ಬಿಟ್ಟೊಡನೆ ನೀಡಿ ನಮ್ಮನ್ನು ಮನೆಯೊಳಗೆ ಆಹ್ವಾನಿಸಿದರು. ನಂತರ ಆಪ್ತವಾದ ಮಾತುಕಥೆ. ಹರಿಹರದ ತಮ್ಮ ಮನೆ, ಹದಿಮೂರರ ಬಾಲೆ ಅಲ್ಲಿ ಡಾ.ಚಂದ್ರಶೇಖರ ಅವರ ಸತಿಯಾಗಿ ಹೋದದ್ದು, ಅಲ್ಲಿ ಗೃಹಿಣಿಯಾಗಿ ತಾವು ಮಕ್ಕಳನ್ನು ಜೊತೆಗೆ ಸಾಹಿತ್ಯವನ್ನು ಬೆಳೆಸಿದ ರೀತಿಯನ್ನು ಕುರಿತು ಮಾತನಾಡಿದರು. ಲಲಿತಮ್ಮ ಒಬ್ಬ ಆದರ್ಶ ಗೃಹಿಣಿ. ಗುಳಿಗೆ ಡಾಕ್ಟರು.. ಗುಳಿಗೆ ಮನೆ ಎಂದೇ ಖ್ಯಾತವಾಗಿದ್ದ ಮನೆಗೆ ಎಲ್ಲೆಲ್ಲಿಂದಲೋ ಜನ ಬರುತ್ತಿದ್ದರು. ಬಂದವರಿಗೆ ತುಂಗಾಸ್ನಾನ ಮಾಡಿಸಿ ಹರಿಹರೇಶ್ವರನ ದರ್ಶನ ಮಾಡಿಸಿ ಪುಷ್ಕಳ ಭೋಜನಗೈಸಿ ಕಳಿಸುವುದು ಲಲಿತಮ್ಮನವರ ಜವಾಬ್ದಾರಿಯಾಗಿತ್ತು. ಅಷ್ಟೇ ಅಲ್ಲ, ಸಮಾಜ ಸೇವೆ ಕೂಡ ಅವರ ಬಾಳಿನ ಪ್ರಮುಖ ಅಂಗ. ನೊಂದವರಿಗೆ ನೆರವು ನೀಡುವುದು, ಅವರ ಊಟ, ಬಟ್ಟೆ ವಸತಿ ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂದುಕೊಂಡಿದ್ದರು. ಪತಿ ಸೀರೆ ಕೊಳ್ಳಲು ಕೊಟ್ಟ ಹಣವನ್ನು ಬಡವರಿಗೆ ದಾನ ಮಾಡಿ ಸಂತೋಷಪಡುತ್ತಿದ್ದರು. ಡಾಕ್ಟರ್ ಹೆಂಡತಿ ಎಂದು ಸಿಂಗರಿಸಿಕೊಂಡು ಸುತ್ತಿದ ದಿನಗಳು ಇಲ್ಲವೇ ಇಲ್ಲ. ಮನೆಯಲ್ಲಿ ಹಳೆಯ ಸೀರೆಯಲ್ಲಿ ಮನೆವಾಳ್ತೆಯಲ್ಲಿ ತೊಡಗಿರುವಾಗ ಕೆಲವೊಮ್ಮೆ ಅತಿಥಿಗಳು ಕೆಲಸದವಳು ಎಂದುಕೊಂಡದ್ದೂ ಉಂಟಂತೆ. ದೇವರ ಪೂಜೆ, ಭಜನೆ, ಗೃಹಕೃತ್ಯ, ಮಕ್ಕಳನ್ನು.. ನೆಂಟರನ್ನು ನೋಡಿಕೊಳ್ಳುವಾಗ ಸಾಹಿತ್ಯಕ್ಕೆ ಸಮಯ ಕಡಿಮೆಯಾಗತೊಡಗಿತು. ಆಗ ಬೆಳಿಗ್ಗೆ ಬೇಗ ನಾಲ್ಕು ಗಂಟೆಗೆ ಎಳುವ ಅಭ್ಯಾಸ ರೂಢಿಸಿಕೊಂಡರು. ಒಂದು ಗಂಟೆಯ ಓದು ಮತ್ತು ಒಂದು ಗಂಟೆಯ ಬರವಣಿಗೆ ಅವರ ಜೀವನಕ್ಕೆ ಚೈತನ್ಯ ತುಂಬಿ ಆನಂದ ನೀಡುತ್ತಿದ್ದವು.
ಸಮಾಜ ಸೇವೆ ಮಾಡುವಾಗಲೂ ಅನೇಕ ಅಗ್ನಿದಿವ್ಯಗಳನ್ನು ಸಾಗಿ ಬಂದದ್ದಿದೆ. ಗುಳಿಗೆ ಡಾಕ್ಟರ್ ಬಳಿ ಮೊದಲು ತೋರಿಸಿಕೊಳ್ಳಲು ಬರುತ್ತಿದ್ದ ಹುಡುಗರು ಬೆಳೆದು ಕಿರ್ಲೋಸ್ಕರ ಫ್ಯಾಕ್ಟರಿಯ ಲೇಬರ್ ಯೂನಿಯನ್ ನ ಲೀಡರ್ ಗಳಾದರು. ಎಂ.ಡಿ.ಯವರು ಪತಿ ಚಂದ್ರಶೇಖರ್ ಅವರ ಸ್ನೇಹಿತರು ಜೊತೆಗೆ ಗಾಲ್ಫ್ ಮತ್ತು ಬ್ಯಾಡ್ಮಿಂಟನ್ ಆಟದ ಜೊತೆಗಾರರು. ವ್ಯವಸ್ಥಾಪಕರು ಮತ್ತು ಕಾರ್ಮಿಕರ ನಡುವೆ ಗಲಾಟೆಗಳಾದಾಗ ಲಲಿತಮ್ಮ ಅವರಿಗೆ ಕರೆ ಬರುತ್ತಿತ್ತಂತೆ. ಇವರು ಹೋಗಿ ಇಬ್ಬರ ನಡುವಿನ ಜಗಳ ಪರಿಹರಿಸಬೇಕಿತ್ತು. ಮೊದಲು ಇವರ ಕೈಯಲ್ಲೇ ಉಂಡು ಬೆಳೆದ ಕಾರ್ಮಿಕರ ಪರವಾಗಿ ಮಾತನಾಡಿದರೆ ಪತಿಯ ಸ್ನೇಹಿತರಾಗಿದ್ದ ಎಂ‌.ಡಿ.ಯವರಿಗೆ ಸಿಟ್ಟು. ಎಂ.ಡಿ.ಪರವಾಗಿ ಮಾತನಾಡಿದರೆ ಕಾರ್ಮಿಕರು ಕೋಪಗೊಳ್ಳುತ್ತಿದ್ದರು. ಲಲಿತಮ್ಮ ಇಂತಹ ಪರಿಸ್ಥಿತಿಗಳನ್ನು ಅತ್ಯಂತ ನಾಜೂಕಾಗಿ ನಿಭಾಯಿಸುತ್ತ ಇಬ್ಬರಲ್ಲಿ ಸಂಧಿ ಮಾಡಿಸುತ್ತಿದ್ದರು.
ಅವರ ಸೊಸೆ ಅನಿತಾ ಕೂಡ ಅಷ್ಟೇ ಸಹೃದಯಿ. ” ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ತಾಳೆ” ಎಂದು ಲಲಿತಮ್ಮ ಬಾಯ್ತುಂಬ ಹೇಳುತ್ತಾರೆ. ಇನ್ನೊಬ್ಬ ಮಗ ಶ್ರೀನಿವಾಸ ಕೂಡ ಆಪ್ತವಾಗಿ ಮಾತನಾಡಿದರು. ಸಿಹಿ ತಿಂಡಿ, ಹಣ್ಣುಗಳು ನಮಗಾಗಿ ಬಂದವು. ” ಹೆಣ್ಣುಮಕ್ಕಳ ಸಮಸ್ಯೆಗಳನ್ನು ಕುರಿತು ಬರೆಯಬೇಕು” ಎಂದು ನನಗೆ ಹೇಳಿದ ಲಲಿತಮ್ಮ ನನ್ನ ಪತಿ ಮಹೇಶ್ ಅವರೊಂದಿಗೂ ಆತ್ಮೀಯವಾಗಿ ಮಾತನಾಡಿದರು. ಹಾಗೆ ” ನೀವು ನಿಮ್ಮ ಪತ್ನಿಗೆ ಬರೆಯಲು ಪ್ರೋತ್ಸಾಹ ನೀಡುವುದು ಬಹಳ ಒಳ್ಳೆಯ ವಿಷಯ. ಹೀಗೇ ಪ್ರೋತ್ಸಾಹಿಸುತ್ತಿರಿ. ಅವರಿನ್ನೂ ಎತ್ತರಕ್ಕೆ ಬೆಳೆಯಬೇಕು” ಎಂದಾಗ ನನ್ನ ಹೃದಯ ತುಂಬಿ ಬಂದಿತ್ತು. ಮಾತೃಹೃದಯಿಗಳನ್ನು ಬಿಟ್ಟರೆ ಬೇರಾರೂ ಹೀಗೆ ಹೇಳಲು ಸಾಧ್ಯವಿಲ್ಲ. ನಾವು ನಿರ್ಗಮಿಸುವಾಗ ನಮಗೆ ಕುಂಕುಮದೊಂದಿಗೆ ಮೇಲ್ಕಾಣಿಸಿದ ವಸ್ತುಗಳೆಲ್ಲ ಬಾಗಿನದ ರೂಪದಲ್ಲಿ ಬಂದಿದ್ದವು. ಸೀರೆ, ರವಿಕೆ ಖಣ, ಇಬ್ಬರಿಗೂ ಟವಲ್, ತೆಂಗಿನಕಾಯಿ, ಪುಟ್ಟ ಗಾಜಿನ ಭರಣಿ, ಪುಸ್ತಕ ಬಾಗಿನ ಮತ್ತು ಮುಖ್ಯವಾಗಿ ಅವರೇ ಕೈಯಾರೆ ರಂಗೋಲಿ ಬಿಡಿಸಿ ಬರೆದ ಪತ್ರ. ನನ್ನ ಪಾಲಿಗೆ ಇವು ಅಮೂಲ್ಯ. ಫೋಟೊ ಕ್ಲಿಕ್ಕಿಸಿಕೊಂಡು ಕೊನೆಯಲ್ಲಿ ” ಮತ್ತೆ ಆಗಾಗ ಬಾರಮ್ಮ, ಕರೆದುಕೊಂಡು ಬನ್ನಿ” ಎಂದು ಹೇಳುತ್ತ ಮುತ್ತಿನ ಸರ ಕೊರಳಿಗೆ ಹಾಕಿದಾಗ ಹೃದಯ ತುಂಬಿ ಬಂದಿತ್ತು. ಕಣ್ಣುಗಳು ತುಂಬಿ ಕೆಳಗುರುಳಲು ಸಿದ್ಧವಾಗಿದ್ದವು. ನಮ್ಮಮ್ಮನ ನೆನಪಾಗಿತ್ತು. ತವರಿನ ನೆನಪು ತಂದ ಲಲಿತಮ್ಮನವರಿಗೆ ಕೋಟಿ ಕೋಟಿ ನಮನ. ಮಧುರಾ (ಅಲಕಾ) ಕರ್ಣಮ್ , 30-04-2026

೩೦-೪-೨೦೨೬ ರಂದು ಲಲಿತಮ್ಮ ಡಾ.ಚಂದ್ರಶೇಖರ್ ರವರ ಮನೆಯಲ್ಲಿ

೩೦-೪-೨೦೨೬ ರಂದು ಲಲಿತಮ್ಮ ಡಾ.ಚಂದ್ರಶೇಖರ್ ರವರ ಮನೆಯಲ್ಲಿ
ಸಾಹಿತ್ಯ ಸಖಿ – ಐದನೆಯ ವರ್ಷದ ಪಾದಾರ್ಪಣೆ 30-4-2026
ಸಾಹಿತ್ಯ ಸಖಿ – ಐದನೆಯ ವರ್ಷದ ಪಾದಾರ್ಪಣೆ 30-4-2026
” ಗೀತಾ‌ ಬಿ.‌ಯು – ಸಂವಾದ 30-4-2026
” ಗೀತಾ‌ ಬಿ.‌ಯು – ಸಂವಾದ 30-4-2026
” ಗೀತಾ‌ ಬಿ.‌ಯು – ಸಂವಾದ 30-4-2026
ಡಾ. ಪಾರ್ವತಿ ಜಿ ಐತಾಳ್ – ಸಂವಾದ ಮತ್ತು ‌ಗೌರವಾರ್ಪಣೆ 16-5-2026
ಡಾ. ಪಾರ್ವತಿ ಜಿ ಐತಾಳ್ – ಸಂವಾದ ಮತ್ತು ‌ಗೌರವಾರ್ಪಣೆ 16-5-2026
ಡಾ. ಪಾರ್ವತಿ ಜಿ ಐತಾಳ್ – ಸಂವಾದ ಮತ್ತು ‌ಗೌರವಾರ್ಪಣೆ 16-5-2026
ಡಾ. ಪಾರ್ವತಿ ಜಿ ಐತಾಳ್ – ಸಂವಾದ ಮತ್ತು ‌ಗೌರವಾರ್ಪಣೆ 16-5-2026
ಡಾ. ಪಾರ್ವತಿ ಜಿ ಐತಾಳ್ – ಸಂವಾದ ಮತ್ತು ‌ಗೌರವಾರ್ಪಣೆ 16-5-2026
ಡಾ. ಪಾರ್ವತಿ ಜಿ ಐತಾಳ್ – ಸಂವಾದ ಮತ್ತು ‌ಗೌರವಾರ್ಪಣೆ 16-5-2026
ಎಂ.ಎಸ್. ನರಸಿಂಹಮೂರ್ತಿ ತಂದೆ ಎಂ ಸೂರಪ್ಪ ದತ್ತಿ ಉಪನ್ಯಾಸ 16-5-2026